ಟೀಂ ಇಂಡಿಯಾಕ್ಕೆ ದಂಡದ ಬರೆ ನೀಡಿದ ಐಸಿಸಿ

ಭಾನುವಾರ, 29 ನವೆಂಬರ್ 2020 (08:22 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಸೋಲುವುದರ ಜತೆಗೆ ಟೀಂ ಇಂಡಿಯಾಕ್ಕೆ ಐಸಿಸಿ ದಂಡದ ಬರೆಯನ್ನು ಹಾಕಿದೆ.


ಮೊದಲ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ ತಪ್ಪಿಗೆ ಐಸಿಸಿ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.20 ರಷ್ಟು ಕಡಿತ ಮಾಡಿ ದಂಡದ ಶಿಕ್ಷೆ ನೀಡಿದೆ. ನಾಯಕ ವಿರಾಟ್ ಕೊಹ್ಲಿ ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲಿ ಯಾವುದೇ ವಿಚಾರಣೆ ಮಾಡಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ