ಬೆಳ್ಳಂ ಬೆಳಿಗ್ಗೆ ಟೀಂ ಇಂಡಿಯಾಗೆ ಕೆಟ್ಟ ಸುದ್ದಿ

ಗುರುವಾರ, 23 ಫೆಬ್ರವರಿ 2017 (09:12 IST)
ಪುಣೆ: ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಟೆಸ್ಟ್ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಟೆಸ್ಟ್ ನಲ್ಲೇ ಟಾಸ್ ಸೋತ ವಿರಾಟ್ ಕೊಹ್ಲಿ ಬಳಗವನ್ನು ಎದುರಾಳಿಗಳು ಬೌಲಿಂಗ್ ಗೆ ಇಳಿಸಿದ್ದಾರೆ.

 
ಹೀಗಾಗಿ ಈ ತಿರುವು ಪಡೆಯುವ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆ ಹಾಕುವ ಟೀಂ ಇಂಡಿಯಾ ಕನಸು ಭಗ್ನವಾಗಿದೆ. ಇಲ್ಲಿ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಹಾಗಾಗಿ ಆಸೀಸ್ ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ.

ಭಾರತ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಸ್ಪಿನ್ ಜೋಡಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜತೆಗೆ ಯುವ ಬೌಲರ್ ಜಯಂತ್ ಯಾದವ್ ಕೂಡಾ ಆಡಲಿದ್ದಾರೆ. ಈ ಪಂದ್ಯದಲ್ಲೂ ಕರುಣ್ ನಾಯರ್ ಗೆ ಸ್ಥಾನ ಸಿಕ್ಕಿಲ್ಲ.

ಅತ್ತ ಆಸೀಸ್ ತಂಡ ಕೂಡಾ ಇಬ್ಬರು ಸ್ಪಿನ್ನರ್ ಗಳು ಮತ್ತು ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದೆ.  ಮತ್ತೊಂದು ಸಮರಕ್ಕೆ ಉಭಯ ತಂಡಗಳು ಸಿದ್ಧವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ