ಏಷ್ಯಾ ಕಪ್ ಫೈನಲ್ ನಲ್ಲಿ ಇಂದು ಮಳೆ ಬಂದರೆ ಏನಾಗುತ್ತದೆ?

ಭಾನುವಾರ, 17 ಸೆಪ್ಟಂಬರ್ 2023 (09:00 IST)
ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಆದರೆ ಇದುವರೆಗೆ ನಡೆದ ಎಲ್ಲಾ ಪಂದ್ಯಗಳೂ ಮಳೆಯ ಭೀತಿಯಲ್ಲೇ ನಡೆದಿದೆ. ಬಹುತೇಕ ಪಂದ್ಯಗಳಿಗೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಎಸಿಸಿ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿದೆ.

ಹೀಗಾಗಿ ಒಂದು ವೇಳೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಅದು ನಾಳೆ ಮುಂದುವರಿಯಲಿದೆ. ಈ ಮೊದಲು ಭಾರತ-ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯ ಇದೇ ರೀತಿ ನಡೆದಿತ್ತು. ಒಂದು ವೇಳೆ ನಾಳೆಯೂ ಮಳೆ ಬಂದು ಪಂದ್ಯ ನಡೆಯದೇ ಹೋದರೆ ಭಾರತ-ಲಂಕಾ ಜಂಟಿ ವಿಜೇತರೆಂದು ಘೋಷಣೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ