ಇನ್ಮುಂದೆ ಟೀಂ ಇಂಡಿಯಾ ಕೋಚ್ ನ ಈ ಅಧಿಕಾರ ಕಟ್!

ಗುರುವಾರ, 18 ಜುಲೈ 2019 (09:42 IST)
ಮುಂಬೈ: ಇದುವರೆಗೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾದವರು ತಮ್ಮ ಸಹಾಯಕ ಸಿಬ್ಬಂದಿಗಳನ್ನೂ ತಮಗೆ ಇಷ್ಟ ಬಂದ ಹಾಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.


ತಮ್ಮ ಆಪ್ತರ ಬಳಗವನ್ನೇ ಬೌಲಿಂಗ್, ಫೀಲ್ಡಿಂಗ್ ಕೋಚ್ ಗಳಾಗಿ ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹಾಲಿ ಕೋಚ್ ರವಿಶಾಸ್ತ್ರಿ ಈ ಅಧಿಕಾರವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು. ಕೋಚ್ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಆಗಿ ಮಾಜಿ ವೇಗಿ ಜಹೀರ್ ಖಾನ್ ರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದರೂ ರವಿಶಾಸ್ತ್ರಿ ಪಟ್ಟು ಹಿಡಿದು ತಮ್ಮ ನೆಚ್ಚಿನ ಭರತ್ ಅರುಣ್ ರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದ್ದರು. ಜಾನ್ ರೈಟ್ ಕಾಲಾವಧಿಯಿಂದಲೂ ಇದು ನಡೆದುಕೊಂಡು ಬಂದಿದೆ.

ಆದರೆ ಇನ್ನು ಮುಂದೆ ಮುಖ್ಯ ಕೋಚ್ ನ ಈ ಅಧಿಕಾರಕ್ಕೆ ಕತ್ತರಿ ಹಾಕುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಬಿಸಿಸಿಐ ಸಲಹಾ ಮಂಡಳಿ ಮುಖ್ಯ ಕೋಚ್ ಆಯ್ಕೆ ಮಾಡಲಿದ್ದು, ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಉಳಿದ ಸಹಾಯಕ ಸಿಬ್ಬಂದಿಗಳ ಆಯ್ಕೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಟೀಂ ಇಂಡಿಯಾಗೆ ಸಂಪೂರ್ಣ ಹೊಸ ಸಹಾಯಕ ಸಿಬ್ಬಂದಿಗಳ ನೇಮಕವಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ