ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸ್ವೀಟ್ ರಿವೆಂಜ್

ಶುಕ್ರವಾರ, 3 ಸೆಪ್ಟಂಬರ್ 2021 (08:48 IST)
ಲಂಡನ್: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಸಾಧಾರಣ ಪ್ರದರ್ಶನ ನೀಡಿದರೂ ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ ಎದುರಾಳಿ ಇಂಗ್ಲೆಂಡ್‍ ಗೆ ತಕ್ಕ ತಿರುಗೇಟು ನೀಡಿದೆ.


ಮೊದಲನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 191 ರನ್ ಗಳಿಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟ್ಸ್  ಮನ್ ಗಳ ಪೈಕಿ ನಾಯಕ ಕೊಹ್ಲಿ 50 ರನ್ ಗಳಿಸಿದ್ದು ಬಿಟ್ಟರೆ ಉಳಿದವರದ್ದು ಅಲ್ಪ ಕಾಣಿಕೆ. ಆದರೆ ಕೆಳ ಕ್ರಮಾಂಕದಲ್ಲಿ ಶ್ರಾದ್ಧೂಲ್ ಠಾಕೂರ್ ಹೊಡೆಬಡಿಯ 57 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ನೀಡಿದರು.

ಇಂಗ್ಲೆಂಡ್ 5 ರನ್ ಗಳಿಸುವಷ್ಟರಲ್ಲಿ ಜಸ್ಪ್ರೀತ್ ಬುಮ್ರಾ ಆರಂಭಿಕರಿಬ್ಬರನ್ನೂ ಪೆವಿಲಿಯನ್ ಗೆ ಕಳುಹಿಸಿದ್ದರು. ಬಳಿಕ ಉಮೇಶ್ ಯಾದವ್ ಅಪಾಯಕಾರಿ ಜೋ ರೂಟ್ ರನ್ನು ಬೌಲ್ಡ್ ಔಟ್ ಮಾಡಿದ್ದು, ಭಾರತದ ಮೇಲುಗೈಗೆ ಕಾರಣವಾದರು. ನಿನ್ನೆಯ ದಿನದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ