ಕೊಹ್ಲಿ-ಶಾಸ್ತ್ರಿ ನಿರ್ಧಾರವನ್ನು ‘ನಾನ್ ಸೆನ್ಸ್’ ಎಂದ ಮಾಜಿ ಕ್ರಿಕೆಟಿಗರು

ಗುರುವಾರ, 2 ಸೆಪ್ಟಂಬರ್ 2021 (16:58 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಬಳಗದ ಬಗ್ಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಗರಂ ಆಗಿದ್ದಾರೆ.


ಈ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಆಗಮನವಾಗಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಕೊಹ್ಲಿ ಮತ್ತೆ ಹಿರಿಯ ಸ್ಪಿನ್ನರ್ ರನ್ನು ಕಡೆಗಣಿಸಿದ್ದಾರೆ. ಓವಲ್ ಪಿಚ್ ಎರಡನೇ ದಿನದ ಬಳಿಕ ಸ್ಪಿನ್ನರ್ ಗಳಿಗೂ ಸಹಕಾರಿ. ಹೀಗಿರುವಾಗ ಅಶ್ವಿನ್ ರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದು, ಶುದ್ಧ ನಾನ್ ಸೆನ್ಸ್ ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಇನ್ನು, ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಗೆ ಅವಕಾಶ ನೀಡಿದ್ದನ್ನೂ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಕೊಹ್ಲಿ-ಶಾಸ್ತ್ರಿ ಮತ್ತೆ ಆಡುವ ಬಳಗದ ಆಯ್ಕೆ ವಿಚಾರದಲ್ಲಿ ತಪ್ಪು ಮಾಡಿದರು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ