ಈ ಆಟಗಾರರು ಬೇಗ ಮಲಗಿ, ಬೇಗ ಏಳಬೇಕು! ಕೋಚ್ ದ್ರಾವಿಡ್ ಫರ್ಮಾನ್!
ಟಿ20 ಸರಣಿ ಕ್ಲೀನ್ ಸ್ವೀಪ್ ಆದ ಬಳಿಕ ಮಾತನಾಡಿರುವ ದ್ರಾವಿಡ್, ಟೆಸ್ಟ್ ತಂಡದಲ್ಲಿರುವ ನಾಲ್ವರು ಆಟಗಾರರನ್ನು ಬಿಟ್ಟು ಉಳಿದವರು ಹಾಯಾಗಿ ಮಲಗಿ ನಿದ್ರಿಸಬಹುದು ಎಂದಿದ್ದಾರೆ.
ಈ ತಂಡದಲ್ಲಿ ಟೆಸ್ಟ್ ಆಡಲಿರುವ ನಾಲ್ಕಾರು ಆಟಗಾರರಿದ್ದಾರೆ. ಅವರೆಲ್ಲಾ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಬೇಕು. ಯಾಕೆಂದರೆ ಟೆಸ್ಟ್ ಪಂದ್ಯ 9.30 ಕ್ಕೆ ಆರಂಭವಾಗಲಿರುವುದರಿಂದ 7.30 ಕ್ಕೆ ಏಳಬೇಕಾಗುತ್ತದೆ. ಉಳಿದ ಆಟಗಾರರು ಲೇಟಾಗಿ ಮಲಗಿ ಲೇಟಾಗಿ ಏಳಬಹುದು, ಎಂಜಾಯ್ ಮಾಡಬಹುದು ಎಂದು ಕೋಚ್ ದ್ರಾವಿಡ್ ಅನುಮತಿ ನೀಡಿದ್ದಾರೆ.