ಸರಣಿ ಕ್ಲೀನ್ ಸ್ವೀಪ್ ಬಳಿಕ ರಾಹುಲ್ ದ್ರಾವಿಡ್ ಹೇಳಿಕೆಗೆ ನೆಟ್ಟಿಗರು ಫಿದಾ
ನಿನ್ನೆಯ ಪಂದ್ಯವನ್ನು 73 ರನ್ ಗಳಿಂದ ಭರ್ಜರಿಯಾಗಿದ್ದ ಟೀಂ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಕೋಚ್ ಆಗಿ ಮೊದಲ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಸಾಧನೆ ಬಗ್ಗೆ ದ್ರಾವಿಡ್ ಹೆಮ್ಮೆ ಪಟ್ಟಿದ್ದಾರೆ. ಹಾಗಿದ್ದರೂ ಅವರ ಎಂದಿನ ಸಮಚಿತ್ತದ ಹೇಳಿಕೆ ಅಭಿಮಾನಿಗಳ ಮನಸೆಳೆದಿದೆ.
ವಿಶ್ವಕಪ್ ನಲ್ಲಿ ಫೈನಲ್ ವರೆಗೂ ಆಡಿ ಎರಡೇ ದಿನದಲ್ಲಿ ಇನ್ನೊಂದು ದೇಶಕ್ಕೆ ಟ್ರಾವೆಲ್ ಮಾಡಿ ಸರಣಿ ಆಡುವುದು ಸುಲಭದ ಮಾತಲ್ಲ. ನ್ಯೂಜಿಲೆಂಡ್ ಪ್ರದರ್ಶನ ಉತ್ತಮವಾಗಿತ್ತು. ನಾವು ಈ ಗೆಲುವಿನ ನಂತರವೂ ಅತಿಯಾಗಿ ಸಂಭ್ರಮಿಸುವುದು ಬೇಡ. ನಮ್ಮ ಕಾಲು ನೆಲದ ಮೇಲೇ ಇರಬೇಕು ಎಂದು ದ್ರಾವಿಡ್ ಹೇಳಿದ್ದಾರೆ. ಅವರ ಈ ಹೇಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.