ಕೊನೆಯವರೆಗೂ ನಿಂತು ಟೀಂ ಇಂಡಿಯಾಗೆ ಗೆಲುವು ಕೊಡಿಸಿದ ಕೆಎಲ್ ರಾಹುಲ್

ಭಾನುವಾರ, 26 ಜನವರಿ 2020 (16:21 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ರಿಂದ ಮುನ್ನಡೆ ಸಾಧಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭ ಉತ್ತಮವಾಗಿದ್ದರೂ ಬಳಿಕ ಭಾರತೀಯ ಬೌಲರ್ ಗಳ ನಿಯಂತ್ರಿತ ದಾಳಿಯಿಂದಾಗಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ ಮತ್ತೆ ಕೈಕೊಟ್ಟರು. 8 ರನ್ ಗಳಿಸಿ ರೋಹಿತ್ ಔಟಾದ ಬೆನ್ನಲ್ಲೇ ನಾಯಕ ಕೊಹ್ಲಿ ಕೂಡಾ 11 ರನ್ ಗಳಿಗೆ ಪೆವಿಲಿಯನ್ ಹಾದಿ ಹಿಡಿದರು. ಈ ವೇಳೆ ಭಾರತಕ್ಕೆ ಆತಂಕ ಕಾಡಿತಾದರೂ ಕೆಎಲ್ ರಾಹುಲ್ ಒಂದೆಡೆ ಜವಾಬ್ಧಾರಿಯುತ ಇನಿಂಗ್ಸ್ ಕಟ್ಟಿದರೆ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮತ್ತೊಂದು ಹೊಡೆಬಡಿಯ ಇನಿಂಗ್ಸ್ ಆಡಿ ಭಾರತವನ್ನು ಗೆಲುವಿನ ಗುರಿ ಮುಟ್ಟಿಸಿದರು. ರಾಹುಲ್ ಅಜೇಯ 57 ರನ್ ಗಳಿಸಿದರೆ ಅಯ್ಯರ್ 33 ಎಸೆತಗಳಿಂದ 44 ರನ್ ಗಳಿಸಿದರು.  ಇದರೊಂದಿಗೆ ಭಾರತ 17.3 ಓವರ್ ಗಳಲ್ಲಿಯೇ 135 ರನ್ ಗಳಿಸಿ ಗುರಿ ಮುಟ್ಟಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ