ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ಜೂನ್ 18 ರಿಂದ 22 ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ಧತೆಯೇನೋ ನಡೆಸುತ್ತಿದೆ. ಆದರೆ ಇದರ ನಡುವೆ ಆತಂಕವೊಂದು ಕಾಡುತ್ತಿದೆ.
ಸೌಥಾಂಪ್ಟನ್ ಮೈದಾನದಲ್ಲಿ ವೇಗಿಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಟಿಮ್ ಸೌಥೀ, ಟ್ರೆಂಟ್ ಬೌಲ್ಟ್ ಈ ಮೈದಾನದಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ತಂಡ ಇಲ್ಲಿನ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿದೆ.
ಈಗ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಕಳೆದ ಕೆಲವು ದಿನಗಳಿಂದ ಟೆಸ್ಟ್ ಆಡಿಲ್ಲ. ಹೀಗಾಗಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದರ ಜೊತೆಗೆ ವೇಗಿಗಳನ್ನು ಎದುರಿಸುವ ಸವಾಲನ್ನೂ ಸ್ವೀಕರಿಸಬೇಕಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರರಂತಹ ಅನುಭವಿಗಳು ಈ ಸವಾಲನ್ನು ಹೊರುವ ಹೊಣೆ ಹೊರಬೇಕಿದೆ.