ದ.ಆಫ್ರಿಕಾ ವಿರುದ್ಧ ಗೆಲುವಿಗೆ ಟೀಂ ಇಂಡಿಯಾಗೆ ಮಳೆ ಆತಂಕ
ಮೊದಲ ಟೆಸ್ಟ್ ಗೆಲ್ಲಲು 305 ರನ್ ಗಳ ಗುರಿ ನೀಡಿದ್ದ ಭಾರತ ಈಗಾಗಲೇ ಆಫ್ರಿಕನ್ನರ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಉಡಾಯಿಸಿದೆ. ಆಫ್ರಿಕಾ 94 ರನ್ ಗಳಿಸಿದೆ. ಇನ್ನೂ ಗೆಲುವಿಗೆ 211 ರನ್ ಬೇಕಾಗಿದೆ.
ಆದರೆ ಇಂದು ಪಂದ್ಯದ ಅಂತಿಮ ದಿನವಾಗಿದ್ದು, ಮಳೆ ಅಡ್ಡಿಯಾದರೆ ಪಂದ್ಯದ ಫಲಿತಾಂಶಕ್ಕೆ ಮುಳುವಾಗಬಹುದು. ಮಳೆ ಬಾರದೇ ಹೋದರೆ ಟೀಂ ಇಂಡಿಯಾ ಗೆಲುವು ಸಾಧಿಸಬಹುದು. ಹೀಗಾಗಿ ಸೋಲು-ಗೆಲುವಿನ ನಡುವೆ ವರುಣ ಗೋಡೆಯಾಗಿ ನಿಂತಿದ್ದಾನೆ.