ಬಾರ್ಡರ್-ಗವಾಸ್ಕರ್ ಟೆಸ್ಟ್: ಇಂಧೋರ್ ಪಿಚ್ ನಲ್ಲಿ ಕುಸಿದ ಟೀಂ ಇಂಡಿಯಾ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್-ಶುಬ್ಮನ್ ಗಿಲ್ ಉತ್ತಮ ಆರಂಭ ನೀಡುವ ಸೂಚನೆ ನೀಡಿದರು. ಆದರೆ ರೋಹಿತ್ 12 ಕ್ಕೆ ಔಟಾದೊಡನೆ ಭಾರತದ ಕುಸಿತ ಆರಂಭವಾಯಿತು.
ಬೌನ್ಸ್ ಮತ್ತು ಟರ್ನ್ ಪಡೆಯುತ್ತಿರುವ ಪಿಚ್ ನಲ್ಲಿ ಸ್ಪಿನ್ನರ್ ಗಳು ಸಂಪೂರ್ಣ ಮೇಲುಗೈ ಸಾಧಿಸುತ್ತಿದ್ದಾರೆ. ಗಿಲ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿ 21 ರನ್ ಗಳಿಸಿ ಔಟಾದರು. ಚೇತೇಶ್ವರ ಪೂಜಾರ ಕೇವಲ 1, ಶ್ರೇಯಸ್ ಅಯ್ಯರ್ ಶೂನ್ಯ, ರವೀಂದ್ರ ಜಡೇಜಾ 4 ರನ್ ಗಳಿಸಿ ಔಟಾದರು. ಬಳಿಕ ವಿರಾಟ್ ಕೊಹ್ಲಿ-ಶ್ರೀಕರ್ ಭರತ್ ಕೊಂಚ ಚೇತರಿಕೆಯ ಲಕ್ಷಣ ತೋರಿದರಾದರೂ 22 ರನ್ ಗಳಿಸಿದ್ದ ಕೊಹ್ಲಿ ಇದೀಗ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಇದರೊಂದಿಗೆ ಭಾರತ 6 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಸಂಕಷ್ಟ ಸ್ಥಿತಿಯಲ್ಲಿದೆ. ಭರತ್ 10 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.