ಟೀಂ ಇಂಡಿಯಾ ಮುಂದಿದೆ ಮೆಗಾ ಹೋಂ ಸೀರೀಸ್

ಮಂಗಳವಾರ, 21 ಸೆಪ್ಟಂಬರ್ 2021 (10:00 IST)
ಮುಂಬೈ: ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾಗೆ ವಿಶ್ರಾಂತಿಯೇ ಇಲ್ಲ. ಮುಂದಿನ 8 ತಿಂಗಳ ಕಾಲ ನಿರಂತರವಾಗಿ ಕ್ರಿಕೆಟ್ ಸರಣಿ ಆಡಲಿದೆ. ಬಿಸಿಸಿಐ ಹೊರಡಿಸಿರುವ ನೂತನ ವೇಳಾಪಟ್ಟಿಯಲ್ಲಿ ಭಾರತದ ಮುಂದಿನ ಸರಣಿಗಳ ವಿವರ ಸಿಕ್ಕಿದೆ.


ಟಿ20 ವಿಶ್ವಕಪ್ ಮುಗಿದ ಬಳಿಕ ಕೇವಲ ಮೂರೇ ದಿನದಲ್ಲಿ ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಇದಾದ ಬಳಿಕ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈ ಎಲ್ಲಾ ಸರಣಿ ನವಂಬರ್ 17 ರಿಂದ ಡಿಸೆಂಬರ್ 7 ವರೆಗೂ ನಡೆಯಲಿದೆ.

ಇದಾದ ಬಳಿಕ ದ.ಆಫ್ರಿಕಾಗೆ ಪ್ರಯಾಣ ಬೆಳೆಸಲಿರುವ ಟೀಂ ಇಂಡಿಯಾ ಡಿಸೆಂಬರ್ 17 ರಿಂದ ಜನವರಿ 26 ರವರೆಗೆ ಕ್ರಿಕೆಟ್ ಸರಣಿ ಆಡಲಿದೆ. ಅದಾದ ಬಳಿಕ ಮತ್ತೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6 ರಿಂದ 20ರವರೆಗೆ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಐದು ದಿನಗಳ ಬ್ರೇಕ್ ಬಳಿಕ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಎರಡು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನೊಳಗೊಂಡ ಸರಣಿ ಮಾರ್ಚ್ 18ರವರೆಗೂ ಮುಂದುವರಿಯಲಿದೆ.  ಅದಾದ ಬಳಿಕ ಎಂದಿನಂತೆ ಐಪಿಎಲ್ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಭಾರತಕ್ಕೆ ದ.ಆಫ್ರಿಕಾ ಪ್ರವಾಸ ಮಾಡಲಿದ್ದು, ಟಿ20 ಸರಣಿ ಆಡಲಿದೆ. ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ ಬಾಕಿಯಿರುವ ಟೆಸ್ಟ್ ಪಂದ್ಯವೂ ನಡೆಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ