ರೋಹಿತ್ ನಾಯಕರಾದ ಬೆನ್ನಲ್ಲೇ ಟೀಂ ಇಂಡಿಯಾ ನಂ.1

ಮಂಗಳವಾರ, 22 ಫೆಬ್ರವರಿ 2022 (09:20 IST)
ಮುಂಬೈ: ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ರೋಹಿತ್ ಶರ್ಮಾಗೆ ಅದೃಷ್ಟ ಒಲಿದಿದೆ. ದಾಖಲೆಯ ಗೆಲುವಿನ ಜೊತೆಗೆ ತಂಡ ಬಹಳ ದಿನಗಳ ನಂತರ ನಂ.1 ಶ್ರೇಯಾಂಕ ಪಡೆದಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದ ಟೀಂ ಇಂಡಿಯಾ ಈಗ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದೆ.

ನಾಯಕನಾಗಿ ರೋಹಿತ್ ಸತತ 9 ನೇ ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ತಂಡವೂ ಮೊದಲನೇ ಸ್ಥಾನಕ್ಕೇರಿರುವುದು ಅವರ ಪಾಲಿಗೆ ಹಿರಿಮೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ