ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿಷೇಧ: ಸಹಾಯಕ ಸಿಬ್ಬಂದಿಗಳಿಗೆ ಟ್ರಕ್ಕಿಂಗ್ ಮಜಾ!

ಬುಧವಾರ, 25 ಅಕ್ಟೋಬರ್ 2023 (17:16 IST)
Photo Courtesy: Twitter
ಧರ್ಮಶಾಲಾ: ಏಕದಿನ  ವಿಶ್ವಕಪ್ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯವಾಡಿದ ಟೀಂ ಇಂಡಿಯಾ ಈಗ ಒಂದು ವಾರದ ಬ್ರೇಕ್ ಪಡೆದಿದೆ.

ಮುಂದಿನ ಪಂದ್ಯ ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಆದರೆ ಅದಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಧರ್ಮಶಾಲಾದ ಕೂಲ್ ವಾತಾವರಣದಲ್ಲಿ ಕ್ರಿಕೆಟಿಗರು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಧರ್ಮಶಾಲಾ ಎಂದರೆ ಇಲ್ಲಿನ ಹಚ್ಚ ಹಸಿರಿನ ನಡುವೆ ಬೆಟ್ಟ-ಗುಡ್ಡಗಳಲ್ಲಿ ಟ್ರಕ್ಕಿಂಗ್ ಮಾಡುವುದಕ್ಕೆ ಹೆಸರು ವಾಸಿ. ಆದರೆ ಟೀಂ ಇಂಡಿಯಾ ಕ್ರಿಕೆಟಿಗರ ದುರಾದೃಷ್ಟ ನೋಡಿ. ಕ್ರಿಕೆಟಿಗರು ಟ್ರಕ್ಕಿಂಗ್ ಮಾಡುವುದು, ಸೈಕ್ಲಿಂಗ್, ಪ್ಯಾರಾ ಗ್ಲೈಡಿಂಗ್ ಮುಂತಾದ ಸಾಹಸಕ್ಕೆ ಕೈಹಾಕುವಂತಿಲ್ಲ ಎಂದು ಬಿಸಿಸಿಐ ಕಟ್ಟುನಿಟ್ಟಾಗಿ ನಿಷೇಧ ಹೇರಿದೆ.

ಆದರೆ ಸಹಾಯಕ ಸಿಬ್ಬಂದಿಗಳಿಗೆ ಮಾತ್ರ ಈ ಅವಕಾಶ ನೀಡಿದೆ. ಅದರಂತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿಗಳ ಬಳಗ ಮಾತ್ರ ಧರ್ಮಶಾಲಾದ ಗುಡ್ಡ-ಬೆಟ್ಟದಲ್ಲಿ ಟ್ರಕ್ಕಿಂಗ್ ಮಾಡಿ ಮಜಾ ಮಾಡಿದ್ದಾರೆ. ಇತ್ತ ಕ್ರಿಕೆಟಿಗರ ಮಜಾ ಮಾತ್ರ ಸ್ವಿಮ್ಮಿಂಗ್ ಗಷ್ಟೇ ಸೀಮಿತವಾಗಿದೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ