ಟೀಂ ಇಂಡಿಯಾದಿಂದ ಕ್ರಿಕೆಟಿಗರಿಗೆ 2 ದಿನ ರಜೆ: ಕುಟುಂಬದವರ ಜೊತೆಗಿರಲು ಅವಕಾಶ
ಟೀಂ ಇಂಡಿಯಾ ಮುಂದಿನ ಪಂದ್ಯಕ್ಕೆ ಆರು ದಿನಗಳ ಬ್ರೇಕ್ ಇದೆ. ಹೀಗಾಗಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಈ ಕಾರಣಕ್ಕೆ ಕುಟುಂಬದವರ ಜೊತೆಗಿರಲು 2-3 ದಿನಗಳ ರಜೆ ನೀಡಲಾಗಿದೆ.
ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದ ಆಟಗಾರರು ಟೀಂ ಇಂಡಿಯಾ ಕ್ಯಾಂಪ್ ನಿಂದ ಹೊರಬಂದು ಕುಟುಂಬದರ ಜೊತೆಗಿರಲು ತೆರಳಿದ್ದಾರೆ.