ಪಾಕ್ ನಾಯಕ ಬಾಬರ್ ಅಝಮ್ ರನ್ನು ಹೊಗಳಿದ ದಿನೇಶ್ ಕಾರ್ತಿಕ್ ಗೆ ಕೊಹ್ಲಿ ಫ್ಯಾನ್ಸ್ ಟೀಕೆ

ಶನಿವಾರ, 28 ಮೇ 2022 (16:41 IST)
ಮುಂಬೈ: ಐಪಿಎಲ್ 2022 ರಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾದಲ್ಲಿ ಮರಳಿ ಸ್ಥಾನ ಗಿಟ್ಟಿಸಿಕೊಂಡಿರುವ ದಿನೇಶ್ ಕಾರ್ತಿಕ್ ಈಗ ಪಾಕ್ ನಾಯಕ ಬಾಬರ್ ಅಝಮ್ ರನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ ಬಾಬರ್ ಅಝಮ್ ಈ ಕಾಲದ ಶ್ರೇಷ್ಠ ಆಟಗಾರನಾಗಬಹುದು ಎಂದು ಹಾಡಿ ಹೊಗಳಿದ್ದರು. ಇದು ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕೊಹ್ಲಿ ಮತ್ತು ಬಾಬರ್ ಅಝಮ್ ನಡುವೆ ಶ್ರೇಷ್ಠರು ಯಾರು ಎಂಬ ವಿಚಾರಕ್ಕೆ ಆಗಾಗ ಚರ್ಚೆಗಳಾಗುತ್ತವೆ. ಇದೀಗ ದಿನೇಶ್ ಕಾರ್ತಿಕ್ ಪಾಕ್ ನಾಯಕನನ್ನು ಹೊಗಳಿರುವುದು ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ