ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಮೊದಲೇ ಟೀಂ ಇಂಡಿಯಾ ತಾಕತ್ತು ಬಯಲು!

ಶುಕ್ರವಾರ, 12 ಮೇ 2017 (07:16 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಭಾಗವಹಿಸುವುದು ನಿರ್ಧಾರವಾಗಿದ್ದು ಕೊನೆ ಗಳಿಗೆಯಲ್ಲಿ. ಆದರೂ ತಂಡದ ತಾಕತ್ತು ಏನೆಂದು ಐಸಿಸಿಗೂ ಮನವರಿಕೆಯಾಗಿದೆ.

 
ಭಾರತ ಆಡುವ ಲೀಗ್, ನಾಕೌಟ್, ಸೆಮೀಸ್ ಪಂದ್ಯಗಳ ಟಿಕೆಟ್ ಗಳೆಲ್ಲವೂ ಸೋಲ್ಡ್ ಔಟ್ ಆಗಿದೆ. ಆ ಮೂಲಕ ಆಯೋಜಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಅದೂ ಕೇವಲ ಒಂದೇ ವಾರದ ಅವಧಿಯಲ್ಲಿ ನಡೆದ ಮ್ಯಾಜಿಕ್ ಎನ್ನುವುದು ವಿಶೇಷ.

ಅದರಲ್ಲೂ ವಿಶೇಷವಾಗಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇನ್ನೀಗ ಮೈದಾನದಲ್ಲಿ ಖರೀದಿಸಬಹುದಾದ ಟಿಕೆಟ್ ಅಷ್ಟೇ ಉಳಿದುಕೊಂಡಿದೆ. 2013 ರ ಚಾಂಪಿಯನ್ಸ್ ಟ್ರೋಫಿಗೆ ಹೋಲಿಸಿದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಆಡುವ ಪಂದ್ಯಗಳಿಗೆ ಡಿಮ್ಯಾಂಡ್ ಹೆಚ್ಚಿದೆ.

ಇತ್ತೀಚೆಗಷ್ಟೇ ತಾವು ಹೆಚ್ಚಿನ ಲಾಭ ತಂದುಕೊಡುವುದರಿಂದ ಹಣಕಾಸಿನ ಪಾಲು ನಮಗೆ ಹೆಚ್ಚು ಸಿಗಬೇಕು ಎಂಬ ಭಾರತೀಯ ಕ್ರಿಕೆಟ್ ಮಂಡಳಿ ಬೇಡಿಕೆಗೆ ಐಸಿಸಿ ಹಾಗೂ ಇತರ ಸದಸ್ಯ ರಾಷ್ಟ್ರಗಳು ನಕಾರ ವ್ಯಕ್ತಪಡಿಸಿದ್ದವು. ಇದನ್ನು ವಿರೋಧಿಸಿ ಭಾರತ ಟೂರ್ನಿ ಬಹಿಷ್ಕರಿಸುವ ಬೆದರಿಕೆ ಒಡ್ಡಿತ್ತು. ಅದರ ಬೆನ್ನಲ್ಲೇ ಭಾರತದ ಪಂದ್ಯಗಳಿಗೆ ಈ ಮಟ್ಟಿಗೆ ಬೆಂಬಲ ಸಿಕ್ಕಿರುವುದು ಬಿಸಿಸಿಐಗೆ ಬಲ ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ