ಭಾರತ-ಲಂಕಾ ಸರಣಿ: ಟೀಂ ಇಂಡಿಯಾ ಆಡುವ ಬಳಗ ಹೇಗಿರಲಿದೆ?
ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಹರ್ ಕೂಡಾ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ರೋಹಿತ್ ಶರ್ಮಾ ತಮ್ಮ ಮೆಚ್ಚಿನ ಆರಂಭಿಕ ಸ್ಥಾನ ಬಿಟ್ಟು ಮಧ್ಯಮ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ.
ಹಾಗಾದಲ್ಲಿ ಋತುರಾಜ್ ಗಾಯಕ್ ವಾಡ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಬಹುದು. ರೋಹಿತ್ ಮೂರನೇ ಕ್ರಮಾಂಕದಲ್ಲಿ ಆಡಲಿಳಿದರೆ, ವೆಂಕಟೇಶ್ ಅಯ್ಯರ್ ಫಿನಿಶರ್ ಸ್ಥಾನಕ್ಕೆ ಬಲ ತುಂಬಬಲ್ಲರು. ಅವರಿಗೆ ಸಾಥ್ ಕೊಡಲು ರವೀಂದ್ರ ಜಡೇಜಾ ಕೂಡಾ ವಾಪಸ್ ಆಗಿರುವುದು ಪ್ಲಸ್ ಪಾಯಿಂಟ್. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿರುವುದರಿಂದ ಅವರಿಗೆ ಜೊತೆಯಾಗಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಬಹುದು. ಭಾರತ ಏಕೈಕ ಸ್ಪಿನ್ನರ್ ನೊಂದಿಗೆ ಕಣಕ್ಕಿಳಿದರೆ ಮೊಹಮ್ಮದ್ ಸಿರಾಜ್ ಆಡುವ ಬಳಗದಲ್ಲಿ ಅವಕಾಶ ಸಿಗಬಹುದು.