ಏಷ್ಯಾ ಕಪ್ ಗಾಗಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ

ಬುಧವಾರ, 30 ಆಗಸ್ಟ್ 2023 (17:44 IST)
ಕೊಲೊಂಬೊ: ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಂದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕೊಲೊಂಬೊಗೆ ಬಂದಿಳಿದಿದೆ.

ಪಾಕಿಸ್ತಾನದ ಆತಿಥ್ಯದಲ್ಲಿ ಪಾಕ್ ಮತ್ತು ಶ್ರೀಲಂಕಾದಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯುತ್ತಿದೆ. ಟೀಂ ಇಂಡಿಯಾ ಎಲ್ಲಾ ಪಂದ್ಯಗಳನ್ನೂ ಶ್ರೀಲಂಕಾದಲ್ಲಿಯೇ ಆಡಲಿದೆ.

ಸೆಪ್ಟೆಂಬರ್ 2 ರಂದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇದಕ್ಕೆ ಮೊದಲು ರೋಹಿತ್ ಪಡೆ ಬೆಂಗಳೂರಿನಲ್ಲಿ ನಾಲ್ಕು ದಿನಗಳ ಅಭ್ಯಾಸ ಶಿಬಿರ ನಡೆಸಿ ಲಂಕಾ ನಾಡಿಗೆ ಪ್ರಯಾಣ ಬೆಳೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ