ಏಷ್ಯಾ ಕಪ್ ಗೆ ಪೇಲವ ಆರಂಭ: ಪಾಕ್ ಮೈದಾನದಲ್ಲಿ ಜನರೇ ಇಲ್ಲ!

ಬುಧವಾರ, 30 ಆಗಸ್ಟ್ 2023 (17:35 IST)
Photo Courtesy: Twitter
ಮುಲ್ತಾನ್: ಏಷ್ಯಾ ಕಪ್ 2023 ಕ್ಕೆ ಇಂದು ಚಾಲನೆ ಸಿಕ್ಕಿದ್ದು, ಮೊದಲ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಉದ್ಘಾಟನಾ ಸಮಾರಂಭ ಆಯೋಜಿಸಿತ್ತು.

ಮುಲ್ತಾನ್ ಮೈದಾನದಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಪಂದ್ಯ ನಡೆಯುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಯಾವುದೇ ವರ್ಣರಂಜಿತ ಕಾರ್ಯಕ್ರಮಗಳಿಲ್ಲದೇ, ಅತ್ತ ಸಾಕಷ್ಟು ಜನರೂ ಇಲ್ಲದೇ ಪೇಲವವಾಗಿ ಕಾರ್ಯಕ್ರಮ ಮುಗಿಸಲಾಯಿತು.

ಬಳಿಕ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯಕ್ಕೂ ಜನ ಕಡಿಮೆ ಸಂಖ್ಯೆಯಲ್ಲಿ ನೆರೆದಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಇತ್ತೀಚೆಗಿನ ವರದಿ ಬಂದಾಗ 35 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ನಾಯಕನ ಆಟವಾಡುತ್ತಿರುವ ಬಾಬರ್ ಅಜಮ್ 81 ರನ್ ಗಳಿಸಿ ಶತಕದ ಹಾದಿಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ