ಇಂದು ಸೋತರೂ ಟೀಂ ಇಂಡಿಯಾಕ್ಕೆ ಸರಣಿ ಸೋಲಿಲ್ಲ

ಗುರುವಾರ, 6 ಜುಲೈ 2017 (09:27 IST)
ಜಮೈಕಾ: ಟೀಂ ಇಂಡಿಯಾ ಯಾವತ್ತೂ ಹಾಗೆ. ಐದು ಪಂದ್ಯಗಳ ಸರಣಿಯಿದ್ದರೆ, ಮೊದಲೆರಡು ಪಂದ್ಯ ಗೆದ್ದು ಮತ್ತೊಂದನ್ನು ಸೋತು ಅಂತಿಮ ಪಂದ್ಯದ ಕುತೂಹಲ ಉಳಿಸಿಕೊಳ್ಳುತ್ತದೆ. ವಿಂಡೀಸ್ ಸರಣಿಯಲ್ಲೂ ಹಾಗೆಯೇ.


ಇಂದು ವಿಂಡೀಸ್ ವಿರುದ್ಧ ಭಾರತ ತಂಡ ನಿರ್ಣಾಯಕ ಪಂದ್ಯವಾಡಲಿದೆ. ಈಗಾಗಲೇ ಭಾರತ ಸರಣಿಯಲ್ಲಿ 2-1 ರಿಂದ ಮುಂದಿದೆ. ಹೀಗಾಗಿ ಈ ಪಂದ್ಯ ನಿರ್ಣಾಯಕವಾಗಿದ್ದು, ಇಂದು ಭಾರತ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ಒಂದು ವೇಳೆ ಸೋತರೂ ಸರಣಿ ಸೋಲಾಗದು. ಸರಣಿ ಸಮಬಲವಾಗುವುದು.

ಕೊನೆಯ ಪಂದ್ಯದಲ್ಲಾದರೂ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ಅವಕಾಶ ಸಿಗುವುದೋ ಎಂದು ಕಾದು ನೋಡಬೇಕು.  ಕಳೆದ ಪಂದ್ಯದಲ್ಲಿ ಪೂರ್ಣ ಫಿಟ್ ಆಗಿರದ ಕಾರಣ ಯುವರಾಜ್ ಸಿಂಗ್ ಆಡಿರಲಿಲ್ಲ.  ಅವರ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಆಡಿದ್ದರೂ, ಹೆಚ್ಚೇನೂ ಸಾಧನೆ ಮಾಡಿರಲಿಲ್ಲ. ಈ ಕಾರಣಕ್ಕೆ ರಿಷಬ್ ಪಂತ್ ಗೆ ಅವಕಾಶ ಸಿಕ್ಕರೂ ಸಿಗಬಹುದು.

ಎಲ್ಲದಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿಗೆ ಇದು ಪ್ರತಿಷ್ಠೆಯ ಕಣವಾಗಲಿದೆ. ಈ ಸರಣಿ ಗೆದ್ದರೆ ವಿದೇಶದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಮೊದಲ ಗೆಲುವಾಗಿದೆ. ಅಲ್ಲದೆ, ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಮೇಲೆ ಕೊಹ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ.

ಇದನ್ನೂ ಓದಿ.. ಸೆಮಿಫೈನಲ್ ಸ್ಥಾನ ಗಟ್ಟಿ ಮಾಡಿಕೊಂಡ ಭಾರತೀಯ ಮಹಿಳೆಯರು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ