ಸರ್ಕಾರ ಒಪ್ಪಿದರೆ ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿ

ಶನಿವಾರ, 16 ಮೇ 2020 (10:02 IST)
ಮುಂಬೈ: ಕೊರೋನಾದಿಂದಾಗಿ ಕ್ರಿಕೆಟ್ ಮಂಡಳಿಗಳು ನಷ್ಟದಲ್ಲಿರಬೇಕಾದರೆ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ಆಯೋಜಿಸುವ ಮೂಲಕ ನಷ್ಟ ತುಂಬಲು ಪ್ರಯತ್ನಿಸುತ್ತಿವೆ.


ಈ ನಡುವೆ ಲಂಕಾ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ಮಂಡಳಿಗೆ ಆಫರ್ ನೀಡಿದೆ. ಖಾಲಿ ಮೈದಾನದಲ್ಲಿ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ಆಯೋಜಿಸಲು ನಾವು ಸಿದ್ಧ ಎಂದು ಪತ್ರ ಮುಖೇನ ತಿಳಿಸಿದೆ.

ಜುಲೈ ಅಂತ್ಯದ ವೇಳೆಗೆ ಈ ಕ್ರಿಕೆಟ್ ಸರಣಿ ಆಯೋಜಿಸುವ ಆಫರ್ ನೀಡಿದೆ. ಇದಕ್ಕೆ ಬಿಸಿಸಿಐ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯ. ಹೀಗಾಗಿ ಸರ್ಕಾರ ಒಪ್ಪಿದರೆ ಜುಲೈ ಅಂತ್ಯದ ವೇಳೆಗೆ ಲಂಕಾ ಪ್ರವಾಸ ಮಾಡಲು ನಾವು ರೆಡಿ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ