ಕೊರೋನಾದಿಂದ ರಕ್ಷಿಸಿಕೊಳ್ಳಲು ಟೀಂ ಇಂಡಿಯಾ ಹೀಗೆ ಮಾಡಲೂ ರೆಡಿಯಂತೆ!

ಶನಿವಾರ, 16 ಮೇ 2020 (09:18 IST)
ಮುಂಬೈ: ಕೊರೋನಾವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಪರಿಣಾಮ ಬೀರಿದೆ. ಸಂಭಾವ್ಯ ನಷ್ಟ ತಪ್ಪಿಸಲು ಎಲ್ಲರೂ ಈಗ ಹೇಗಾದರೂ ಸರಿಯೇ ಪಂದ್ಯಾವಳಿ ನಡೆಸಲು ಸುರಕ್ಷಿತ ದಾರಿ ಏನಿದೆ ಎಂದು ಚಿಂತಿಸುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ಹೊಸ ಐಡಿಯಾ ಮಾಡಿದೆ.


ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ವರ್ಷಾಂತ್ಯಕ್ಕೆ ಕಾಂಗಾರೂಗಳ ನಾಡಿಗೆ ಪ್ರವಾಸ ತೆರಳಬೇಕಿದೆ. ಒಂದು ವೇಳೆ ಈ ಸರಣಿ ರದ್ದಾದರೆ ಭಾರೀ ನಷ್ಟವಾಗಲಿದೆ.

ಈ ನಷ್ಟ ತಪ್ಪಿಸಲು ಟೀಂ ಇಂಡಿಯಾ ಆಸೀಸ್ ನಲ್ಲಿ ಎರಡು ವಾರಗಳ ಕ್ವಾರಂಟೈನ್ ಗೂ ರೆಡಿ ಎಂದು ಈ ಮೊದಲೇ ಹೇಳಿತ್ತು. ಆದರೆ ನಿಜವಾಗಿ ಭಯವಿರುವುದು ಮೈದಾನದಲ್ಲಿ. ಹೀಗಾಗಿ ಇದಕ್ಕೂ ಒಂದು ಪರಿಹಾರ ಕಂಡುಕೊಂಡಿದೆ. ಒಂದು ವೇಳೆ ಆಸ್ಟ್ರೇಲಿಯಾ ಮಂಡಳಿ ಒಪ್ಪುವುದಾದರೆ ಸದ್ಯಕ್ಕೆ ಸುರಕ್ಷಿತ ತಾಣವಾಗಿರುವ ಅಡಿಲೇಡ್ ನಲ್ಲೇ ಎಲ್ಲಾ ಟೆಸ್ಟ್ ಪಂದ್ಯಗಳನ್ನೂ ಆಡಲು ಸಿದ್ಧ ಎಂದು ಬಿಸಿಸಿಐ ಉನ್ನತಾಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಆಸೀಸ್ ಕ್ರಿಕೆಟ್ ಮಂಡಳಿ ಯಾವ ತೀರ್ಮಾನ ಕೈಗೊಳ್ಳುತ್ತದೋ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ