ಸ್ಯಾನಿಟೈಸರ್ ಗಾಗಿಯೇ ಭಾರೀ ಖರ್ಚು ಮಾಡಲಿದೆಯಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ

ಶನಿವಾರ, 16 ಮೇ 2020 (09:45 IST)
ಲಂಡನ್: ಕೊರೋನಾ ಮುಗಿದರೂ ಅದರ ಪರಿಣಾಮ ತಪ್ಪದು. ಈ ಮಹಾಮಾರಿ ರೋಗ ನಿಯಂತ್ರಣಕ್ಕೆ ಬಂದ ಬಳಿಕವೂ ಕ್ರೀಡಾ ಕೂಟಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಯೇ ಆಡಬೇಕಾಗುತ್ತದೆ.


ಶುಚಿತ್ವ ಕಾಪಾಡಲು ಸ್ಯಾನಿಟೈಸರ್ ಬಳಕೆ ಮಾಡುವುದು ಸಾಮಾನ್ಯ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಂತೂ ಸ್ಯಾನಿಟೈಸರ್ ಬಳಕೆಗಾಗಿಯೇ ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಲಿದೆಯಂತೆ!

ಈಗಾಗಲೇ ಕ್ರಿಕೆಟಿಗರಿಗೆ ತರಬೇತಿ ಶುರು ಮಾಡಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಗತ್ಯ ಸುರಕ್ಷಿತಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯೂ ಆಟಗಾರರಿಗೆ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಿದೆ. ಇದಕ್ಕಾಗಿ ಇಷ್ಟೊಂದು ದುಬಾರಿ ವೆಚ್ಚ ಮಾಡುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ