ಇಂದು ಕೀವೀಸ್ ವಿರುದ್ಧ ಟಿ20 ಪಂದ್ಯ ಗೆದ್ದರೆ ಟೀಂ ಇಂಡಿಯಾ ದಾಖಲೆ

ಬುಧವಾರ, 1 ನವೆಂಬರ್ 2017 (08:27 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ನ ಹಲವು ದಾಖಲೆಗಳನ್ನು ಮಾಡಿದೆ. ಆದರೆ ಈ ಒಂದು ದಾಖಲೆ ಮಾತ್ರ ಇದುವರೆಗೆ ಒಲಿದಿರಲಿಲ್ಲ. ಅದೀಗ ತನ್ನ ಹೆಸರಿಗೆ ಮಾಡುವ ಅವಕಾಶ ಎದುರಾಗಿದೆ.

 
ಇಂದು ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ದಾಖಲೆ ಮಾಡಲಿದೆ.

ಇದುವರೆಗೆ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ಪಂದ್ಯ ಗೆದ್ದಿಲ್ಲ. ಇಂದು ಗೆದ್ದರೆ ಇದು ಟೀಂ ಇಂಡಿಯಾಗೆ ಕೀವೀಸ್ ವಿರುದ್ಧ ಮೊದಲ ಟಿ20 ಜಯವಾಗಲಿದೆ. ಇದುವರೆಗೆ 6 ಬಾರಿ ಟಿ20 ಯಲ್ಲಿ ಟೀಂ ಇಂಡಿಯಾ-ನ್ಯೂಜಿಲೆಂಡ್ ಮುಖಾಮುಖಿಯಾಗಿದೆ. ಆದರೆ ಆರೂ ಬಾರಿ ಸೋಲನುಭವಿಸಿದೆ. ಇಂದಾದರೂ ಸೋಲಿನ ಸರಪಳಿ ಕಳಚಿ ಬೀಳುತ್ತಾ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ