ಧೋನಿ ಬಗ್ಗೆ ಶಾಕಿಂಗ್ ವಿವರ ಹೊರಹಾಕಿದ ಪುಸ್ತಕ!

ಮಂಗಳವಾರ, 31 ಅಕ್ಟೋಬರ್ 2017 (10:21 IST)
ಮುಂಬೈ: ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಬರೆದ ಡೆಮಾಕ್ರಸಿ ಇಲೆವೆನ್ ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಬಗ್ಗೆ ಶಾಕಿಂಗ್ ವಿವರವೊಂದನ್ನು ಬಹಿರಂಗಪಡಿಸಿದ್ದಾರೆ.

 
ಭಾರತ ತಂಡದ ಅತ್ಯಂತ ಯಶಸ್ವೀ ನಾಯಕ ಎಂದೇ ಪರಿಗಣಿಸಲ್ಪಟ್ಟ ಧೋನಿಯನ್ನು ಒಮ್ಮೆ ಆಯ್ಕೆಗಾರರು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಿದ್ದರಂತೆ. 2012 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸಾಲು ಸಾಲು ಸೋಲು ಅನುಭವಿಸಿದ ಬಳಿಕ ಮೊಹಿಂದರ್ ಅಮರನಾಥ್ ನೇತೃತ್ವದ ಆಯ್ಕೆ ಸಮಿತಿ ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಚಿಂತನೆ ನಡೆಸಿತ್ತಂತೆ.

ಆದರೆ ಆಗ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್. ಶ್ರೀನಿವಾಸನ್ ಧೋನಿ ಪದಚ್ಯುತಿಯನ್ನು ತಮ್ಮ ಪ್ರಭಾವ ಬಳಸಿ ತಡೆದರಂತೆ. ವಿಶೇಷವೆಂದರೆ ಶ್ರೀನಿವಾಸನ್ ಮಾಲಿಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ನಾಯಕರಾಗಿದ್ದರು. ಅಲ್ಲದೆ, ಧೋನಿ ಮತ್ತು ಶ್ರೀನಿವಾಸನ್ ನಡುವೆ ಆಪ್ತ ಸಂಬಂಧವಿದೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದನ್ನು ಸ್ವತಃ ಶ್ರೀನಿವಾಸನ್ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ನಮಗೆ ಎರಡೆರಡು ವಿಶ್ವಕಪ್ ಗೆದ್ದು ಕೊಟ್ಟ ನಾಯಕನನ್ನು ಕಾಪಾಡಿದರೆ ತಪ್ಪೇನು? ಜನ ಈ ಬಗ್ಗೆ ಏನು ಹೇಳಿದರೂ ತಲೆ ಕೆಡಿಸಿಕೊಳ್ಳಲ್ಲ ಎಂದು ಶ್ರೀನಿವಾಸನ್ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ