ಐತಿಹಾಸಿಕ ಪಂದ್ಯದಲ್ಲಿ ಟೀಂ ಇಂಡಿಯಾ ಮಾಡಿದ ದಾಖಲೆಗಳೆಷ್ಟು ಗೊತ್ತಾ?

ಬುಧವಾರ, 14 ಫೆಬ್ರವರಿ 2018 (09:26 IST)
ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯವನ್ನು 73 ರನ್ ಗಳಿಂದ ಗೆಲ್ಲುವ ಮೂಲಕ ಇತಿಹಾಸ ಬರೆದ ವಿರಾಟ್ ಕೊಹ್ಲಿ ಪಡೆ ಹಲವು ದಾಖಲೆ ಬರೆದಿದೆ.
 

ಇದು 25 ವರ್ಷಗಳ ನಂತರ ಭಾರತ ದ.ಆಫ್ರಿಕಾದಲ್ಲಿ ಸರಣಿ ಗೆಲುವಿನ ಸಾಧನೆ ಮಾಡಿತು. ಇದರೊಂದಿಗೆ ನಾಯಕನಾಗಿ ಕೊಹ್ಲಿ ಏಕದಿನ ಗೆಲುವಿ ಸಂಖ್ಯೆ 32 ಕ್ಕೇರಿತು.

ಈ ಸರಣಿಯಲ್ಲಿ ಭಾರತೀಯ ಸ್ಪಿನ್ನರ್ ಗಳದ್ದೇ ಕಾರುಬಾರು ಎನ್ನುವುದಕ್ಕೆ ಈ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಯಿತು. ಐದು ಪಂದ್ಯಗಳಿಂದ ಯಜುವೇಂದ್ರ ಚಾಹಲ-ಕುಲದೀಪ್ ಯಾದವ್ ಜೋಡಿ 30 ವಿಕೆಟ್ ಬುಟ್ಟಿಗೆ ಹಾಕಿಕೊಂಡಿತು. ಇದು ದ.ಆಫ್ರಿಕಾದಲ್ಲಿ ಗಮನಾರ್ಹ ಸಾಧನೆ.

ದ.ಆಫ್ರಿಕಾ ಕೊನೆಯ ಬಾರಿಗೆ ತವರಿನಲ್ಲಿ ಸರಣಿ ಸೋತಿದ್ದು, ಪಾಕಿಸ್ತಾನ ವಿರುದ್ಧ 2013 ರಲ್ಲಿ. ಅದರ ನಂತರ ಇದೀಗ ಭಾರತದ ವಿರುದ್ಧವೇ ಸರಣಿ ಸೋತಿರುವುದು. ವಿದೇಶಗಳಲ್ಲಿ ಭಾರತಕ್ಕೆ ಇದು ಎರಡನೇ ಅತ್ಯುತ್ತಮ ಅಂತರದ ಸರಣಿ ಗೆಲುವಾಗಿದೆ. ಇದಕ್ಕೆ ಮೊದಲು ಶ್ರೀಲಂಕಾದಲ್ಲಿ 5 ಪಂದ್ಯಗಳ ಸರಣಿಯನ್ನು ವೈಟ್ ವಾಶ್ ಮಾಡಿಕೊಂಡಿತ್ತು. ಅಷ್ಟೇ ಅಲ್ಲ, 2016 ರಿಂದ ಇದುವರೆಗೆ ಭಾರತ ತಾನಾಡಿದ ಯಾವುದೇ ಏಕದಿನ ಸರಣಿಯನ್ನು ಸೋತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ