ಐತಿಹಾಸಿಕ ಪಂದ್ಯದಲ್ಲಿ ಮನೀಶ್ ಪಾಂಡೆಗೆ ಸಿಗುತ್ತಾ ಛಾನ್ಸ್!
ಮಂಗಳವಾರ, 13 ಫೆಬ್ರವರಿ 2018 (04:49 IST)
ಪೋರ್ಟ್ ಎಲಿಜೆಬತ್: ಕಾಮನಬಿಲ್ಲಿನ ನಾಡಿನಲ್ಲಿ ಹೊಸದೊಂದು ಇತಿಹಾಸ ರಚಿಸಲು ಸಿದ್ಧವಾಗಿರುವ ಟೀಂ ಇಂಡಿಯಾ ಇಂದು ಐದನೇ ಏಕದಿನ ಆಡಲು ಸಜ್ಜಾಗಿದೆ.
ಆದರೆ ಭಾರತ ತಂಡಕ್ಕೆ ಕಳೆದ ಪಂದ್ಯದಲ್ಲಿ ಮಾಡಿದ್ದ ಸ್ವಯಂಕೃತ ಅಪರಾಧಗಳನ್ನು ತಿದ್ದಿಕೊಳ್ಳುವ ಅನಿವಾರ್ಯತೆಯಿದೆ. ಫೀಲ್ಡಿಂಗ್ ಮಾಡಿದ ತಪ್ಪುಗಳು, ಬೌಲಿಂಗ್ ನಲ್ಲಿ ತೋರಿದ ಬೇಜವಾಬ್ದಾರಿತನ ತಿದ್ದಿಕೊಳ್ಳಲೇಬೇಕಿದೆ.
ಕೊಹ್ಲಿ, ಧವನ್ ಆಟದಿಂದಾಗಿ ಭಾರತ ತಂಡದ ಬ್ಯಾಟಿಂಗ್ ಹುಳುಕು ಹೆಚ್ಚಾಗಿ ಹೊರ ಬಂದಿಲ್ಲ. ಹಾಗಿದ್ದರೂ ಮಧ್ಯಮ ಕ್ರಮಾಂಕ ಇನ್ನೂ ಸಿಡಿದಿಲ್ಲ. ಅಜಿಂಕ್ಯಾ ರೆಹಾನೆ, ಹಾರ್ದಿಕ್ ಪಾಂಡ್ಯ ತಮ್ಮ ಖ್ಯಾತಿಗೆ ತಕ್ಕ ಆಟವಾಡಿಲ್ಲ. ರೋಹಿತ್ ಶರ್ಮಾ ಕೂಡಾ ಪರದಾಡುತ್ತಿದ್ದಾರೆ. ಇದರಿಂದಾಗಿ ನಿರೀಕ್ಷೆಗೆ ತಕ್ಕ ರನ್ ಸ್ಕೋರ್ ಆಗುತ್ತಿಲ್ಲ. ಹೀಗಾಗಿ ರೆಹಾನೆಗೆ ಆರಂಭಿಕ ಸ್ಥಾನಕ್ಕೆ ಬಡ್ತಿ ನೀಡಿ ಕನ್ನಡಿಗ ಮನೀಶ್ ಪಾಂಡೆಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಎಲ್ಲಾ ಹುಳುಕಳನ್ನು ಮೀರಿ ಇಂದು ಗೆಲ್ಲಲು ಸಾಧ್ಯವಾದರೆ ಭಾರತದ ಎದುರು ಹೊಸದೊಂದು ಇತಿಹಾಸ ತೆರೆಯಲಿದೆ. ಇದುವರೆಗೆ ಆಫ್ರಿಕಾ ನಾಡಿನಲ್ಲಿ ಮರೀಚಿಕೆಯಾಗಿದ್ದ ಸರಣಿ ಗೆಲುವು ಟೀಂ ಇಂಡಿಯಾ ಕೈ ವಶ ಮಾಡಿಕೊಳ್ಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ