ದ.ಆಫ್ರಿಕಾ ಗೆಲುವಿಗೆ ಪೈಪೋಟಿ ಮೊತ್ತ ನೀಡಿದ ಟೀಂ ಇಂಡಿಯಾ

ಶುಕ್ರವಾರ, 26 ಜನವರಿ 2018 (19:52 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲು ಅತಿಥೇಯ ತಂಡಕ್ಕೆ ಟೀಂ ಇಂಡಿಯಾ 240 ರನ್ ಗಳ ಗುರಿ ನಿಗದಿ ಪಡಿಸಿದೆ.
 

ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 247 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಜಿಂಕ್ಯಾ ರೆಹಾನೆ (48) ಗರಿಷ್ಠ ಸ್ಕೋರರ್ ಆದರು. ಕೊಹ್ಲಿ 41 ರನ್ ಗಳಿಸಿದರು. ಆದರೆ ಎದುರಾಳಿಗೆ ಪೈಪೋಟಿ ಮೊತ್ತ ನಿಗದಿಪಡಿಸಲು ಕಾರಣರಾಗಿದ್ದು ಬಾಲಂಗೋಚಿಗಳು.

ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅಂತಿಮವಾಗಿ ಅದ್ಭುತವಾಗಿ ಬ್ಯಾಟ್ ಬೀಸಿದರು. ಯಾವುದೇ ಅಳುಕಿಲ್ಲದೇ ಬ್ಯಾಟ್ ಮಾಡಿದ ಭುವಿ 33 ರನ್ ಮತ್ತು ಶಮಿ 27 ರನ್ ಗಳಿಸಿ ಔಟಾದರು. ಅಂತಿಮವಾಗಿ ಇಶಾಂತ್ 7 ರನ್ ಗಳಿಸಿ ಅಜೇಯರಾಗುಳಿದರು. ದ.ಆಫ್ರಿಕಾ ಪರ ಫಿಲ್ಯಾಂಡರ್, ರಬಾಡಾ ಮತ್ತು ಮೋರ್ನೆ ಮಾರ್ಕೆಲ್ ತಲಾ 3 ವಿಕೆಟ್ ಕಬಳಿಸಿದರು. ಈ ಪಿಚ್ ನಲ್ಲಿ ಇದು ಪೈಪೋಟಿ ಮೊತ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ