ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೂರನೇ ದಿನದಾಟವೂ ಮಂದ ಬೆಳಕಿನ ಕಾರಣದಿಂದ ನಿಗದಿತ ಸಮಯಕ್ಕಿಂತ ಮೊದಲೇ ಮುಕ್ತಾಯಗೊಂಡಿದೆ.
ಮೂರನೇ ದಿನದಂತ್ಯಕ್ಕೆ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿದ್ದು, ಟೀಂ ಇಂಡಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಲು 7 ರನ್ ಗಳಷ್ಟೇ ಬಾಕಿಯಿದೆ. ದಿನದಂತ್ಯಕ್ಕೆ ಲಂಕಾ ಪರ ನಿರೋಶಾನ್ ಡಿಕ್ ವೆಲಾ 14 ಮತ್ತು ನಾಯಕ ದಿನೇಶ್ ಚಂಡಿಮಾಲ್ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.
ಭಾರತದ ಪರ ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಈ ನಡುವೆ ವೇಗಿ ಮೊಹಮ್ಮದ್ ಶಮಿ ಗಾಯಗೊಂಡು ಪೆವಿಲಿಯನ್ ಗೆ ಮರಳಿದ್ದು, ಅವರ ಓವರ್ ನ್ನು ನಾಯಕ ವಿರಾಟ್ ಕೊಹ್ಲಿ ಪೂರ್ತಿಗೊಳಿಸಿದರು.
ಪಂದ್ಯ ಸಂಪೂರ್ಣವಾಗಿ ಲಂಕಾ ಹಿಡಿತದಲ್ಲಿದ್ದು, ಇನ್ನುಳಿದ ಎರಡು ದಿನ ಸಂಪೂರ್ಣ ಆಟ ನಡೆದರೆ ಭಾರತಕ್ಕೆ ಸೋಲಿನ ಭೀತಿ ಗ್ಯಾರಂಟಿ. ಹಾಗಾಗಿ ಮಂದ ಬೆಳಕು ಹೀಗೇ ಮುಂದುವರಿಯಲಿ ಎಂದು ಭಾರತ ಆಶಿಸುವಂತಾಗಿದೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ