ನಾಗ್ಪುರ: ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಊಟದ ವಿರಾಮಕ್ಕೆ ಮೊದಲು ಎದುರಾಳಿಗಳ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಲಂಕಾ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ಎಚ್ಚರಿಕೆಯಿಂದ ನಿಧಾನಗತಿಯ ಇನಿಂಗ್ಸ್ ಕಟ್ಟುತ್ತಿರುವ ಲಂಕಾ ಕಳೆದ ಪಂದ್ಯದಲ್ಲಿ ಆದ ತಪ್ಪುಗಳನ್ನು ಸರಿಪಡಿಸುವ ಧಾವಂತದಲ್ಲಿದೆ.
ಆದರೆ ಕಳೆದ ಪಂದ್ಯದ ಹೀರೋಗಳಾದ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲೂ ಭಾರತೀಯ ಬೌಲಿಂಗ್ ಪಡೆ ಉತ್ತಮವಾಗಿಯೇ ದಾಳಿ ಸಂಘಟಿಸುತ್ತಿದೆ. ಒಂದು ವಿಕೆಟ್ ಇಶಾಂತ್ ಶರ್ಮಾ ಪಾಲಾದರೆ, ಇನ್ನೊಂದು ವಿಕೆಟ್ ಅಶ್ವಿನ್ ಪಾಲಾಯಿತು. ಈ ಸರಣಿಯಲ್ಲಿ ಸ್ಪಿನ್ನರ್ ಗಳು ವಿಕೆಟ್ ಗಳಿಸಿದ್ದು ಇದೇ ಮೊದಲು ಎಂಬುದು ವಿಶೇಷ.
ಕಳೆದ ಪಂದ್ಯದಂತೆ ಸಂಪೂರ್ಣವಾಗಿ ಇದು ವೇಗಿಗಳ ಪಿಚ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಭಾರತದ ಸ್ಪಿನ್ ಜೋಡಿ ಅಶ್ವಿನ್-ಜಡೇಜಾ ಕೊಂಚ ಲಾಭ ಪಡೆಯುತ್ತಿದ್ದಾರೆ. ಬಹುಶಃ ಎರಡನೇ ದಿನ ಕಳೆದಂತೆ ಮತ್ತಷ್ಟು ಸ್ಪಿನ್ನರ್ ಗಳಿಗೆ ಪಿಚ್ ನೆರವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ