ಪ್ರಿಪರೇಟರಿ ಪರೀಕ್ಷೆಗೆ ಸಿದ್ಧವಾದ ಟೀಂ ಇಂಡಿಯಾ ಕ್ರಿಕೆಟಿಗರು!

ಮಂಗಳವಾರ, 3 ಜುಲೈ 2018 (09:20 IST)
ಲಂಡನ್: ಮಹತ್ವದ ಭಾರತ-ಇಂಗ್ಲೆಂಡ್ ಸರಣಿ ಇಂದಿನಿಂದ ಆರಂಭವಾಗಲಿದ್ದು, ಮೊದಲನೆಯದಾಗಿ ಟಿ20 ಪಂದ್ಯದೊಂದಿಗೆ ಟೀಂ ಇಂಡಿಯಾ ಲಂಡನ್ ಡೈರಿ ಪ್ರಾರಂಭವಾಗಲಿದೆ.
 

ಇಂದು ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಮೂರು ಟಿ20 ಪಂದ್ಯಗಳನ್ನೊಳಗೊಂಡ ಸರಣಿಯ ಮೊದಲ ಟಿ20 ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಪಂದ್ಯ ನಡೆಯಲಿದ್ದು, ಸೋನಿ ಚಾನೆಲ್ ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ.

ಏಕದಿನ ಮತ್ತು ಟೆಸ್ಟ್ ಸರಣಿಗೆ ಮೊದಲು ಭಾರತೀಯರಿಗೆ ಇಂಗ್ಲೆಂಡ್ ನ ಹವಾಗುಣಕ್ಕೆ ಹೊಂದಿಕೊಳ್ಳಲು ಈ ಚುಟುಕು ಕ್ರಿಕೆಟ್ ಸರಣಿ ಪೂರ್ವಭಾವಿ ಸರಣಿ ಎಂದೇ ಪರಿಗಣಿಸಲಾಗುತ್ತಿದೆ. ಸಾಕಷ್ಟು ಯುವ ಆಟಗಾರರನ್ನೊಳಗೊಂಡಿರುವ ಟೀಂ ಇಂಡಿಯಾ ಹುಡುಗರಿಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ದೃಷ್ಟಿಯಿಂದ ಇದು ಉತ್ತಮ ವೇದಿಕೆಯಾಗಲಿದೆ.

ಮ್ಯಾಂಚೆಸ್ಟರ್ ನ ಈ ಮೈದಾನ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದಂತಿದ್ದು, ಭಾರತೀಯ ಹೊಡೆಬಡಿಯ ಬ್ಯಾಟಿಂಗ್ ಗಣಕ್ಕೆ ಸಿಡಿಯಲು ಉತ್ತಮ ಅವಕಾಶ ಎದುರಾಗಲಿದೆ. ಅಂತೆಯೇ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಟೀಂ ಇಂಡಿಯಾ ಪಾಲಿಗೆ ಪ್ರಮುಖ ಅಸ್ತ್ರವಾಗಲಿದೆ. ಹಾಗಿದ್ದರೂ ಐರ್ಲೆಂಡ್ ನಂತೆ ಇಂಗ್ಲೆಂಡ್ ನ್ನು ಯಾವುದೇ ಕಾರಣಕ್ಕೂ ಕಾಣುವಂತಿಲ್ಲ. ಇಂಗ್ಲೆಂಡ್ ನ ವೇಗದ ಪಿಚ್ ಗಳಲ್ಲಿ ವೇಗಿಗಳನ್ನು ಭಾರತೀಯರು ಹೇಗೆ ಎದುರಿಸಿ ನಿಲ್ಲುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ