ಟೀಂ ಇಂಡಿಯಾಗೆ ಟೆಸ್ಟ್ ನಲ್ಲಿ ಹೋದ ಮಾನ ಏಕದಿನದಲ್ಲಿ ಸಿಗುವುದೇ?
ಈ ಸರಣಿ ಗೆದ್ದರೆ ಭಾರತಕ್ಕೆ ನಂ.1 ಪಟ್ಟ ಮಾತ್ರವಲ್ಲ, ಆಫ್ರಿಕಾ ನೆಲದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ಗೌರವವೂ ಸಿಗುತ್ತದೆ. ಹೆಚ್ಚು ಕಡಿಮೆ ಅದೇ ತಂಡದೊಂದಿಗೆ ಭಾರತ ಕಣಕ್ಕಿಳಿಯುತ್ತಿದ್ದರೂ ಧೋನಿ ತಂಡದ ಬಲ ಹೆಚ್ಚಿಸಲಿದ್ದಾರೆ. ಧೋನಿಯ ಅನುಭವ ಸೊರಗಿರುವ ತಂಡಕ್ಕೆ ಉಪಯುಕ್ತವಾಗಲಿದೆ.
ಆದರೆ ಏಕದಿನ ಫಾರ್ಮ್ಯಾಟ್ ಟೆಸ್ಟ್ ಗೆ ಹೋಲಿಸಿದರೆ ಸಂಪೂರ್ಣ ವ್ಯತ್ಯಸ್ತವಾಗಿರುತ್ತದೆ. ಭಾರತದಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿಂತು ಆಡಿದರೆ ಇಬ್ಬರೇ ಸಾಕು ಆಫ್ರಿಕಾವನ್ನು ಮಟ್ಟ ಹಾಕಲು. ಆದರೆ ಯಾವುದಕ್ಕೂ ಮನಸ್ಸು ಮಾಡಬೇಕಷ್ಟೇ.