ಇಂಗ್ಲೆಂಡ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾಕ್ಕೆ ಕಠಿಣ ರೂಲ್ಸ್

ಸೋಮವಾರ, 17 ಮೇ 2021 (08:47 IST)
ಮುಂಬೈ: ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾಗೆ ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ.


ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಠಿಣ ನಿಯಮಗಳಿಗೊಳಪಡಲಿದ್ದಾರೆ. ವಿರಾಟ್ ಕೊಹ್ಲಿ ಬಳಗ ಲಂಡನ್ ವಿಮಾನವೇರುವ ಮುನ್ನ ಮೂರು ಬಾರಿ ಆರ್ ಟಿಪಿಸಿಆರ್ ಟೆಸ್ಟ್ ಜೊತೆಗೆ ಕ್ವಾರಂಟೈನ್ ಗೊಳಗಾಬೇಕಾಗುತ್ತದೆ. ನೆಗೆಟಿವ್ ವರದಿ ಬಂದರೆ ಮಾತ್ರ ಇಂಗ್ಲೆಂಡ್ ಪ್ರವಾಸ ಮಾಡಬಹುದು.

ಮೇ 19 ಕ್ಕೇ ಎಲ್ಲಾ ಕ್ರಿಕೆಟಿಗರೂ ಮುಂಬೈನಲ್ಲಿ ಒಟ್ಟು ಸೇರಲಿದ್ದಾರೆ. ಜೂನ್ 2 ರಂದು ಕ್ರಿಕೆಟಿಗರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಕೇವಲ ಕ್ರಿಕೆಟಿಗರು ಮಾತ್ರವಲ್ಲದೆ, ಅವರ ಜೊತೆ ಪ್ರಯಾಣಿಸಲಿರುವ ಕುಟುಂಬ ಸದಸ್ಯರಿಗೂ ಇದೇ ನಿಯಮಗಳು ಅನ್ವಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ