ಒಳ್ಳೆ ಕೆಲಸ ಮಾಡಿದ್ರೂ ಕೆಟ್ಟ ಕಾಮೆಂಟ್: ಕೆಂಡಾಮಂಡಲರಾದ ಕ್ರಿಕೆಟಿಗ ಹನುಮ ವಿಹಾರಿ

ಭಾನುವಾರ, 16 ಮೇ 2021 (09:20 IST)
ಮುಂಬೈ: ಕೊರೋನಾ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಲು ಹೊರಟ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿಗೆ ನೆಟ್ಟಿಗನೊಬ್ಬ ಅಸಭ್ಯ ಪ್ರಶ್ನೆ ಕೇಳಿದ್ದು, ಇದಕ್ಕೆ ವಿಹಾರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


ವಿಹಾರಿ ತಮ್ಮ 100 ಜನರ ಸ್ವಯಂ ಸೇವಕರ ಬಳಗದೊಂದಿಗೆ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಅದರಂತೆ ತಂದೆ ಮತ್ತು ಸಹೋದರನ ಚಿಕಿತ್ಸೆಗೆ ಧನ ಸಹಾಯ ಮಾಡಿ ಎಂದು ಕೇಳಿಕೊಂಡ ಯುವತಿಯ ಮನವಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಿಪೋಸ್ಟ್ ಮಾಡಿದ್ದರು.

ಇದನ್ನು ನೋಡಿ ನೆಟ್ಟಿಗನೊಬ್ಬ ‘ನೀವು ಖ್ಯಾತ ಕ್ರಿಕೆಟಿಗರಲ್ಲವೇ? ನೀವೇ ಯಾಕೆ ಅವರಿಗೆ ಹಣ ನೀಡಬಾರದು?’ ಎಂದು ಕೀಳುಮಟ್ಟದ ಕಾಮೆಂಟ್ ಹಾಕಿದ್ದ. ಇದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಿರುವ ವಿಹಾರಿ ‘ನಿನ್ನಂತಹವರೂ ಈ ದೇಶದಲ್ಲಿದ್ದಾರೆ ಎಂಬುದೇ ನಾಚಿಕೆಗೇಟಿನ ವಿಚಾರ, ನಿಜಕ್ಕೂ ಶೇಮ್’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ