ಏಷ್ಯಾ ಕಪ್ ಟೂರ್ನಿಗೆ ಹೊಸ ಜೆರ್ಸಿಯಲ್ಲಿ ಆಡಲಿರುವ ಟೀಂ ಇಂಡಿಯಾ

ಶನಿವಾರ, 27 ಆಗಸ್ಟ್ 2022 (09:20 IST)
ದುಬೈ: ಯುಎಇನಲ್ಲಿ ಇಂದಿನಿಂದ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹೊಸ ವಿನ್ಯಾಸದ ಜೆರ್ಸಿಯಲ್ಲಿ ಆಡಲಿದ್ದಾರೆ.

ನಾಳೆ ಭಾರತಕ್ಕೆ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಿದ್ದು, ಈ ಪಂದ್ಯಕ್ಕೆ ಭಾರತೀಯ ಆಟಗಾರರು ಹೊಸ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅತ್ತ ಪಾಕ್ ತಂಡವೂ ಹೊಸ ವಿನ್ಯಾಸದ ಜೆರ್ಸಿ ತೊಟ್ಟುಕೊಳ್ಳಲಿದೆ.

ಭಾರತೀಯರ ಜೆರ್ಸಿ ಬಣ್ಣ ನೀಲಿಯೇ ಆಗಿರಲಿದೆ. ಆದರೆ 2022 ರ ಏಷ್ಯಾ ಕಪ್ ಲಾಂಛನ, ಕೂಟದ ಹೆಸರು ಮತ್ತು ಮೂರು ನಕ್ಷತ್ರಗಳನ್ನು ಸೇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ