ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ಪ್ರಶಸ್ತಿ ಗೆದ್ದ ತಂಡ ಯಾವುದು?

ಶುಕ್ರವಾರ, 26 ಆಗಸ್ಟ್ 2022 (08:40 IST)
ದುಬೈ: ನಾಳೆಯಿಂದ ಅಧಿಕೃತವಾಗಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದ್ದು, ಈ ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ಪ್ರಶಸ್ತಿ ಗೆದ್ದ ತಂಡ ಯಾವುದು ನೋಡೋಣ.

ಏಷ್ಯಾ ತಂಡಗಳ ಪೈಕಿ ಟೀಂ ಇಂಡಿಯಾ ಬಲಿಷ್ಠ. ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್ ಆದ ದಾಖಲೆ ಭಾರತ ತಂಡದ್ದಾಗಿದೆ. ಒಟ್ಟು ಏಳು ಬಾರಿ ಭಾರತ ಏಷ್ಯಾ ಕಪ್ ಚಾಂಪಿಯನ್ ಆಗಿದೆ. 1984, 1988, 1990, 1995,2010, 2016, 2018 ರಲ್ಲಿ ಭಾರತ ಚಾಂಪಿಯನ್ ಆಗಿತ್ತು.

1984 ರಲ್ಲಿ ಏಷ್ಯಾ ಕಪ್ ಟೂರ್ನಿ ಆರಂಭವಾಗಿತ್ತು. ಇದುವರೆಗೆ ಒಟ್ಟು 14 ಬಾರಿ ಏಷ್ಯಾ ಕಪ್ ಆಯೋಜನೆಯಾಗಿದೆ. ಕೊನೆಯ ಬಾರಿಗೆ 2018 ರಲ್ಲಿ ಏಷ್ಯಾ ಕಪ್ ಆಯೋಜನೆಯಾಗಿತ್ತು. ಈ ಕೂಟದಲ್ಲಿ ಭಾರತ ವಿಜಯಿಯಾಗಿ ಹಾಲಿ ಚಾಂಪಿಯನ್ ಪಟ್ಟದಲ್ಲಿದೆ. ಈ ಬಾರಿ ಮತ್ತೆ ಯುಎಇನಲ್ಲಿ ಏಷ್ಯಾ ಕಪ್ ಆಯೋಜನೆಯಾಗಿದ್ದು ಭಾರತ ಫೇವರಿಟ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ