ಲಂಡನ್: ಪಾಕಿಸ್ತಾನ ವಿರುದ್ಧ ಇಂದು ಚಾಂಪಿಯನ್ಸ್ ಟ್ರೋಫಿ ಕೂಟದ ಮೊದಲ ಪಂದ್ಯವಾಡಲಿರುವ ಟೀಂ ಇಂಡಿಯಾ ಹೊಸ ವಿನ್ಯಾಸದ ಜೆರ್ಸಿ ತೊಟ್ಟು ಆಡಲಿದ್ದಾರೆ.
ಟೀಂ ಇಂಡಿಯಾದ ಅಧಿಕೃತ ಪ್ರಾಯೋಜಕರಾದ ಒಪ್ಪೊ ಮೊಬೈಲ್ ಸಂಸ್ಥೆ ಆಟಗಾರರಿಗೆ ಹೊಸ ವಿನ್ಯಾಸದ ಜೆರ್ಸಿ ನೀಡಿದೆ. ಆಟಗಾರರಿಗೆ ಇದನ್ನು ಒಪೊ ಸಂಸ್ಥೆಯ ಅಧಿಕಾರಿಗಳು ನೀಡುತ್ತಿರುವುದನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತಿತರ ಪ್ರಮುಖ ಆಟಗಾರರ ಉಪಸ್ಥಿತಿಯಲ್ಲಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಒಪ್ಪೊ ಐದು ವರ್ಷಗಳಿಗೆ ಟೀಂ ಇಂಡಿಯಾ ಅಧಿಕೃತ ಪ್ರಾಯೋಜಕತ್ವ ವಹಿಸಿಕೊಂಡಿದೆ.