ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಗೆದ್ದರೆ ಟೀಂ ಇಂಡಿಯಾಕ್ಕೆ ಸಿಗಲಿರುವ ಬಹುಮಾನ ಮೊತ್ತ ಎಷ್ಟು ಗೊತ್ತೇ?!

ಶುಕ್ರವಾರ, 17 ಫೆಬ್ರವರಿ 2017 (08:46 IST)
ಮುಂಬೈ: ಫೆಬ್ರವರಿ 23 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ಭಾರೀ ಮೊತ್ತದ ಹಣ ಜೇಬಿಗಿಳಿಸಲಿದೆ.

 
ಸದ್ಯಕ್ಕೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ 6.70 ಕೋಟಿ ರೂ. ಬಹುಮಾನ ಪಡೆಯುವುದು ಖಚಿತವಾಗಿದೆ. ಒಂದೊಮ್ಮೆ ಸೋತರೆ ಸರಣಿಯ ಉಳಿದ ಪಂದ್ಯಗಳಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವವರೆಗೂ ಕಾಯಬೇಕು.

ಪ್ರತೀ ವರ್ಷ ನಂ.1 ಟೆಸ್ಟ್ ತಂಡಕ್ಕೆ ಐಸಿಸಿಯಿಂದ ಬಹುಮಾನ ಮೊತ್ತ ಲಭಿಸುತ್ತದೆ. ಅದೇ ರೀತಿ ಟೀಂ ಇಂಡಿಯಾಗೂ ಇದು ಲಭಿಸಲಿದೆ. ಹಾಗಾಗಿ ಈ ನಿಟ್ಟಿನಲ್ಲಿಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಮಹತ್ವದ್ದಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ