ಟೆಸ್ಟ್ ಚಾಂಪಿಯನ್ ಶಿಪ್ ಗೆ ಟೀಂ ಇಂಡಿಯಾ ‘ಜಂಬೋ’ ಟೀಂ

ಸೋಮವಾರ, 29 ಮಾರ್ಚ್ 2021 (09:28 IST)
ಮುಂಬೈ: ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಟೀಂ ಇಂಡಿಯಾ ಜಂಬೋ ತಂಡವನ್ನೇ ರವಾನಿಸಲಿದೆ!


ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಭಾರೀ ಸಂಖ್ಯೆಯ ಸದಸ್ಯರನ್ನು ಕರೆದೊಯ್ಯಲಿದೆ. ಕೊರೋನಾ ಕಾರಣದಿಂದ ದೊಡ್ಡ ತಂಡವೇ ಇಂಗ್ಲೆಂಡ್ ವಿಮಾನವೇರಲಿದೆ. ಇದರಲ್ಲಿ ಕ್ರಿಕೆಟಿಗರು ಮಾತ್ರವಲ್ಲದೆ, ನೆಟ್ ಬೌಲರ್ ಗಳು, ಸಹಾಯಕ ಸಿಬ್ಬಂದಿಗಳ ಗಡಣವೇ ಇರಲಿದೆ.

ಈ ಮೊದಲು ಆಸ್ಟ್ರೇಲಿಯಾ ಸರಣಿಗೂ ಟೀಂ ಇಂಡಿಯಾ ಸುಮಾರು 50 ಸದಸ್ಯರ ತಂಡವನ್ನು ಕಳುಹಿಸಿಕೊಟ್ಟಿತ್ತು. ವಿಪರ್ಯಾಸವೆಂದರೆ ಕೊನೆಗೆ ಗಾಯಾಳುಗಳ ಪಟ್ಟಿಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು. ಈ ಬಾರಿ ಏಕೈಕ ಫೈನಲ್ ಪಂದ್ಯಕ್ಕೂ ಭಾರತ ಮುನ್ನೆಚ್ಚರಿಕೆ ದೃಷ್ಟಿಯಿಂದ ದೊಡ್ಡ ತಂಡವನ್ನೇ ಕಳುಹಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ