ಕ್ರಿಕೆಟಿಗರ ಜತೆ ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾಗೆ ಜತೆಯಾಗಲಿರುವ ಅಡುಗೆ ಭಟ್ಟ

ಶನಿವಾರ, 30 ಮಾರ್ಚ್ 2019 (08:45 IST)
ಮುಂಬೈ: ಇಂಗ್ಲೆಂಡ್ ನಲ್ಲಿ ಜೂನ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ತೆರಳಲಿರುವ ಟೀಂ ಇಂಡಿಯಾ ಜತೆಗೆ ಅಡುಗೆ ಭಟ್ಟರೂ ಸೇರಿಕೊಳ‍್ಳಲಿದ್ದಾರೆ.


ಇದಕ್ಕೂ ಮೊದಲು ಇಂಗ್ಲೆಂಡ್ ‍ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರು ಆಹಾರ ಸಮಸ್ಯೆ ಎದುರಿಸಿದ್ದರು. ಇದೀಗ ವಿಶ್ವಕಪ್ ಸಂದರ್ಭದಲ್ಲಿ ಕ್ರಿಕೆಟಿಗರ ಫಿಟ್ನೆಸ್ ಮತ್ತು ಡಯಟ್ ಬಗ್ಗೆ ಫಿಟ್ನೆಸ್ ಗುರು ಶಂಕರ್ ಬಸು ಪ್ರಾಮುಖ್ಯತೆ ವಹಿಸಿದ್ದಾರೆ.

ಹೀಗಾಗಿ ಕ್ರಿಕೆಟಿಗರ ಆಹಾರ ಕ್ರಮಕ್ಕೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಲು ಪಾಕ ತಜ್ಞರೂ ತಂಡದ ಜತೆಗೆ ಪ್ರಯಾಣ ಬೆಳೆಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ