ಲಗೇಜ್ ಬರಲು ವಿಳಂಬ: ಭಾರತ-ವಿಂಡೀಸ್ ಟಿ20 ತಡವಾಗಿ ಆರಂಭ

ಸೋಮವಾರ, 1 ಆಗಸ್ಟ್ 2022 (20:25 IST)
ಸೈಂಟ್ ಕಿಟ್ಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಬೇಕಿರುವ ಟಿ20 ಪಂದ್ಯ ವಿಳಂಬವಾಗಿದೆ. ಇದಕ್ಕೆ ಕಾರಣವೂ ವಿಚಿತ್ರವಾಗಿದೆ.

ಇದುವರೆಗೆ ಭಾರತ ತಂಡ ಎಲ್ಲಾ ಪಂದ್ಯಗಳನ್ನು ಟ್ರಿನಿಡಾಡ್ ನಲ್ಲಿ ಆಡಿತ್ತು. ಇಂದಿನ ಪಂದ್ಯ ಸೈಂಟ್ ಕಿಟ್ಸ್ ನಲ್ಲಿ ನಡೆಯುತ್ತಿದೆ. ಟ್ರಿನಿಡಾಡ್ ನಿಂದ ಎರಡೂ ತಂಡಗಳ ಲಗೇಜ್ ಸೈಂಟ್ ಕಿಟ್ಸ್ ಬರಲು ತಡವಾಗಿರುವುದರಿಂದ ಇಂದಿನ ಪಂದ್ಯ ಭಾರತೀಯ
ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಆರಂಭವಾಗಲಿದೆ ಎಂದು ವಿಂಡೀಸ್ ಮಂಡಳಿ ಪ್ರಕಟಿಸಿದೆ.

ಸಾಮಾನ್ಯವಾಗಿ ಮಳೆಯ ಕಾರಣಕ್ಕೆ ಪಂದ್ಯ ವಿಳಂಬವಾಗುತ್ತದೆ.  ಆದರೆ ಇಲ್ಲಿ ಲಗೇಜ್ ಕಾರಣಕ್ಕೆ ವಿಳಂಬವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ