ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಗೆದ್ದ ಟೀಂ ಇಂಡಿಯಾ

ಬುಧವಾರ, 23 ಜನವರಿ 2019 (14:14 IST)
ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಅಧಿಕಾರಯುತವಾಗಿ ಗೆದ್ದುಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 157 ರನ್ ಗಳಿಗೆ ಆಲೌಟ್ ಆಗಿತ್ತು. ಗೆಲುವಿಗೆ 158 ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಎಚ್ಚರಿಕೆಯ ಆರಂಭ ಪಡೆಯಿತು. ಹಾಗಿದ್ದರೂ ರೋಹಿತ್ ಶರ್ಮಾ ಬೇಗನೇ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಈ ನಡುವೆ ಸೂರ್ಯನ ಪ್ರಖರತೆಯಿಂದಾಗಿ ಆಟ ಕೆಲ ಕಾಲ ಸ್ಥಗಿತಗೊಂಡಿತು.

ಹೀಗಾಗಿ ಪಂದ್ಯ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 49 ಓವರ್ ಗೆ ಕಡಿತಗೊಂಡಿತು. ಹಾಗೂ ಟಾರ್ಗೆಟ್ 156 ಕ್ಕೆ ಇಳಿಕೆಯಾಯಿತು. ಈ ನಡುವೆ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟಿದ ಶಿಖರ್ ಧವನ್ 75 ರನ್ ಗಳಿಸಿ ಅಂತ್ಯದವರೆಗೆ ಅಜೇಯರಾಗುಳಿದರು. ನಾಯಕ ಕೊಹ್ಲಿ 45 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ 34.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಈ ನಡುವೆ ಶಿಖರ್ ಧವನ್ ಅತೀ ಕಡಿಮೆ ಇನಿಂಗ್ಸ್ ನಲ್ಲಿ ಏಕದಿನ ಪಂದ್ಯಗಳಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಭಾರತೀಯರ ಪೈಕಿ ಧೋನಿ, ಗಂಗೂಲಿಯನ್ನು ಹಿಂದಿಕ್ಕಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ