ಭಾರತ-ನ್ಯೂಜಿಲೆಂಡ್ ಏಕದಿನ: ಇತಿಹಾಸ ನಿರ್ಮಿಸಿದ ಮೊಹಮ್ಮದ್ ಶಮಿ
ಅದರಲ್ಲೂ ವೇಗಿ ಮೊಹಮ್ಮದ್ ಶಮಿ ಮತ್ತು ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಕಿತ್ತರೆ, ಕೇದಾರ್ ಜಾದವ್ ಒಂದು ವಿಕೆಟ್ ಕಬಳಿಸಿದ್ದಾರೆ. ಮಾರ್ಟಿನ್ ಗುಪ್ಟಿಲ್ ರನ್ನು ಔಟ್ ಮಾಡಿದ ಶಮಿ ಏಕದಿನ ಪಂದ್ಯಗಳಲ್ಲಿ 100 ನೇ ಬಲಿ ಪಡೆದರು. ಆ ಮೂಲಕ ಅತೀ ವೇಗವಾಗಿ ಅಂದರೆ 56 ಪಂದ್ಯಗಳಿಂದ 100 ವಿಕೆಟ್ ಕಿತ್ತ ವೇಗಿ ಎಂಬ ಭಾರತೀಯ ದಾಖಲೆ ಮಾಡಿದರು. ಇದಕ್ಕೂ ಮೊದಲು ಅತೀ ವೇಗದ 100 ವಿಕೆಟ್ ದಾಖಲೆ ಇರ್ಫಾನ್ ಪಠಾಣ್ ಹೆಸರಿನಲ್ಲಿತ್ತು.