ನ್ಯೂಜಿಲೆಂಡ್ ಟಿ20 ಸರಣಿ ಗೆದ್ದ ಟೀಂ ಇಂಡಿಯಾ
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಗ್ಲೆನ್ ಫಿಲಿಪ್ಸ್ 34 ರನ್ ಗಳಿಸಿದರೆ ಮಾರ್ಟಿನ್ ಗುಪ್ಟಿಲ್, ಡೆರಿಲ್ ಮಿಚೆಲ್ ತಲಾ 31 ರನ್ ಗಳಿಸಿದರು.
ಈ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ರಾಹುಲ್-ರೋಹಿತ್ ಜೋಡಿ ಶತಕದ ಜೊತೆಯಾಟ ನೀಡಿತು. ರಾಹುಲ್ 65 ರನ್ ಗಳಿಸಿ ಔಟಾದರೆ ರೋಹಿತ್ 55 ರನ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ರಿಷಬ್ ಎರಡು ಸತತ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವು ಕೊಡಿಸಿದರು. ಅಂತಿಮವಾಗಿ ಭಾರತ 17.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು.