ಐಪಿಎಲ್ ಫೈನಲ್ ಪಂದ್ಯಗಳಿಗಿರಲ್ಲ ಟೀಂ ಇಂಡಿಯಾ ಆಟಗಾರರು

ಸೋಮವಾರ, 8 ಮೇ 2023 (07:10 IST)
ಮುಂಬೈ: ಐಪಿಎಲ್ ಮುಗಿದ ತಕ್ಷಣ ಟೀಂ ಇಂಡಿಯಾ ಆಟಗಾರರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅಗ್ನಿಪರೀಕ್ಷೆಯಿದೆ.

ಈ ಪ್ರತಿಷ್ಠಿತ ಟೂರ್ನಿ ಜೂನ್ 7 ರಂದು ಇಂಗ್ಲೆಂಡ್ ನ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೆ ಈಗಾಗಲೇ ತಂಡದ ಆಯ್ಕೆಯೂ ನಡೆದಿದೆ.

ಮೇ 23-24 ರಂದು ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ದ್ರಾವಿಡ್ ಜೊತೆಗೆ ಲೀಗ್ ಪಂದ್ಯದಲ್ಲೇ ಐಪಿಎಲ್ ಮುಗಿಸಿದ ಆಟಗಾರರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ