ಐಪಿಎಲ್ 2023: ಗುಜರಾತ್-ಲಕ್ನೋ ಮುಖಾಮುಖಿ
ಲಕ್ನೋ ಸೂಪರ್ ಜೈಂಟ್ಸ್ ಗೆ ಈಗಾಗಲೇ ನಾಯಕ ಕೆಎಲ್ ರಾಹುಲ್ ಅನುಪಸ್ಥಿತಿ ಕಾಡಲಿದೆ. ಅವರ ಸ್ಥಾನಕ್ಕೆ ಕನ್ನಡಿಗ ಕರುಣ್ ನಾಯರ್ ಗೆ ಅವಕಾಶ ಸಿಕ್ಕಿದೆ. ಆದರೆ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಕಾದು ನೋಡಬೇಕಿದೆ. ಸದ್ಯಕ್ಕೆ 10 ಪಂದ್ಯಗಳಿಂದ 5 ಗೆಲುವು ಸಂಪಾದಿಸಿರುವ ಲಕ್ನೋ 6 ನೇ ಗೆಲುವಿನ ನಿರೀಕ್ಷೆಯಲ್ಲಿದೆ.
ಅತ್ತ ಗುಜರಾತ್ ಟೈಟನ್ಸ್ 10 ಪಂದ್ಯಗಳಿಂದ 7 ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದೆ. ಹಾರ್ದಿಕ್ ಪಡೆ ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಅದೇ ಪ್ರದರ್ಶನ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.