ಐಪಿಎಲ್ 2023: ಗುಜರಾತ್ ಎದುರು ಲಕ್ನೋಗೆ ಹೀನಾಯ ಸೋಲು
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಗಳ ಭರ್ಜರಿ ಮೊತ್ತ ದಾಖಲಿಸಿತು. ವೃದ್ಧಿಮಾನ್ ಸಹಾ 81, ಶುಬ್ಮನ್ ಗಿಲ್ ಅಜೇಯ 94 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಯಿತು. ಕ್ವಿಂಟನ್ ಡಿ ಕಾಕ್ 70, ಕೈಲ್ ಮೇಯರ್ಸ್ 48 ರನ್ ಗಳ ಕೊಡುಗೆ ನೀಡಿದರು. ಆದರೆ ಆರಂಭಿಕರು ನೀಡಿದ ಉತ್ತಮ ಆರಂಭವನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಲಕ್ನೋ ಬ್ಯಾಟಿಗರು ವಿಫಲರಾದರು. ಗುಜರಾತ್ ಪರ ಮೋಹಿತ್ ಶರ್ಮಾ 4 ವಿಕೆಟ್ ಕಬಳಿಸಿದರು.