ತೆಲಂಗಾಣ ರಾಜ್ಯಕ್ಕೆ ಬರಲಿದೆ ಪ್ರತ್ಯೇಕ ಕ್ರಿಕೆಟ್ ಸಂಸ್ಥೆ!
ಶುಕ್ರವಾರ, 30 ಡಿಸೆಂಬರ್ 2016 (08:27 IST)
ಮುಂಬೈ: ಹೊಸ ರಾಜ್ಯ ಉದಯವಾದ ಮೇಲೆ ಎಲ್ಲವೂ ಹೊಸದಾಗಿ ಆಗಬೇಕು. ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡ ರಾಜ್ಯವಾಗಿ ಉದಯವಾಗಿರುವ ತೆಲಂಗಾಣವೂ ಇದಕ್ಕೆ ಹೊರತಲ್ಲ. ಅಲ್ಲೀಗ ಹೊಸ ಕ್ರಿಕೆಟ್ ಸಂಸ್ಥೆ ತಲೆ ಎತ್ತಲಿದೆ.
ಇದುವರೆಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲೇ ತೆಲಂಗಾಣ ರಾಜ್ಯವೂ ಬರುತ್ತಿತ್ತು. ಇನ್ನು ಮುಂದೆ ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಎಂದು ಹೊಸದಾಗಿ ಕ್ರಿಕೆಟ್ ಮಂಡಳಿ ಸ್ಥಾಪಿಸಿ ರಾಜ್ಯದಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವ ತಂತ್ರ ತೆಲಂಗಾಣ ರಾಜ್ಯದ್ದು.
ಇದಕ್ಕಾಗಿ ಭಾರತೀಯ ಕ್ರಿಕೆಟ್ ಸಂಸ್ಥೆಗೆ ತೆಲಂಗಾಣ ಕ್ರಿಕೆಟ್ ಸಂಸ್ಥೆಯನ್ನು ಅನುಮೋದಿಸುವಂತೆ ಮನವಿ ಮಾಡಿದೆ. ಒಂದು ವೇಳೆ ಬಿಸಿಸಿಐ ಈ ಹೊಸ ಸಂಸ್ಥೆಯನ್ನು ಅನುಮೋದಿಸಿದರೆ, ಶ್ರೀಮಂತ ಕ್ರಿಕೆಟ್ ಮಂಡಳಿಯ ಎಲ್ಲಾ ಸವಲತ್ತುಗಳೂ ಇದಕ್ಕೆ ಲಭಿಸಲಿದೆ.
ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಗೆ ಅನುಮೋದನೆ ನೀಡಲು ಬಿಸಿಸಿಐಯ ಉನ್ನತ ಅಧಿಕಾರಿಗಳು ಮತ್ತು ಭಾರತ ಸರ್ಕಾರದ ಉನ್ನತ ಸಚಿವಾಲಯಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತೆಲಂಗಾಣ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ